ವಾರಂಗಲ್ ಜಿಲ್ಲೆಯ ಏನಬಾವಿ ಹೈದರಾಬಾದಿನಿಂದ ಮೂರು ತಾಸು ದೂರ.ಐವತ್ತು ಕುಟುಂಬಗಳ ಸಾವಯವ ಸಾವಯವ ರಾಸಾಯನಿಕ ಕಿತನಾಶಕಗಳಿಗೆ ನೂರಕ್ಕೆ ನೂರು ಸಾವಯವ. ಆಂಧ್ರದಲ್ಲಿ ಸಾವಯವ ಕೃಷಿ ಜನಪ್ರಿಯಗೊಳಿಸುವ ಒಂದು ಜಾಣ್ಮೆ 'ಎನ್.ಪಿ.ಎಂ' ಎಂದರೆ ನಾನ್ ಪೆಸ್ಟಿಸೈಡಲ್ ಮ್ಯಾನೇಜ್‍ಮೆಂಟ್. ಪೀಡೆನಾಶಕ ರಹಿತನಿರ್ವಹಣೆ (ಪೀರನಿ ಅನ್ನೋಣ) . ಸಾಹುಕಾರರ ಸಾಲ ಜಾಲಕ್ಕೆ ಸಿಕ್ಕಿ ಅದರಿಂದ ಹೊರಬರಲಾಗದೆ ತೊಳಲಾಡುತ್ತಿದ್ದ ಇಲ್ಲಿನ ಕುಟುಂಬಗಳು ಈಗ ಚಿಗುರುತ್ತಿವೆ. ನಾವು ಭೇಟಿ ಕೊಟ್ಟಾಗ ಮೂರು-ನಾಲ್ಕು ಹೊಸ ಮನೆಗಳ ನಿರ್ಮಾಣ ಆಗುತ್ತಿತ್ತು. ಕಾಯಿಲೆ ಕಸಾಲೆಗಳು ಕಡಮೆಯಾಗಿವೆ. ರಾಸಾಯನಿಕ ಬಳಸಿದರೆ ೫೦,೦೦೦ ರೂ. ದಂಡ ಅಂತ ಈ ಹಳ್ಳಿ ವಿಧಿಸಿದೆ!
ಪೀರನಿ ಪಿಯಸಿ ಕಲಿದಂತೆ. ಸಾವಯವ ಕೃಷಿ ಪದವಿ ಶಿಕ್ಷಣ. ಮೊತ್ತಮೊದಲು ರಾಸಾಯನಿಕ ಕೀಟನಾಶಕಗಳಿಗೆ ಬೈಬೈ.ನಂತರ ರಸಗೊಬ್ಬರಗಳಿಗೆ. ಪರ್ಯಾಯಗಳನ್ನು ಸ್ಥಳೀಯ ಒಳಸುರಿಗಳಿಂದ ತಯಾರಿ. ಈ ದಾರಿಯಲ್ಲಿ ಪರಿವರ್ತನೆಯ ಕೆಲಸ ಬೇಗನೆ ಆಗುತ್ತಿದೆಯಂತೆ. ಸೆಂಟರ್ ಫಾರ್ ಸಸ್ಟೈನೇಬಲ್ ಅಗ್ರಿಕಲ್ಚರ್ ಈ ಕೆಲಸಕ್ಕೆ ತಂತ್ರಜ್ಞಾನದ ಮಾರ್ಗದರ್ಶನ ಮಾಡುತ್ತಿದೆ. ಹೈದರಾಬಾದಿನ ಈ ಸಂಸ್ಥೆಯ ರೂವಾರಿ ಡಾ. ರಾಮಾಂಜನೇಯಲು ಅವರ ಪ್ರಕಾರ ರಾಜ್ಯದ ಏಳು ಲಕ್ಷ ಗ್ರಾಮಗಳಲ್ಲಿ ಈಗ ಪೀರನಿ ಯಶಸ್ವಿ.
ಪೀರನಿ ಸಾವಯವ ಕೃಷಿಗೆ ಒಂದು ಶಾರ್ಟ್ ಕಟ್. ಸಾವಯವ ಕೃಷಿಗೂ ಜಲ ಸಂರಕ್ಷಣೆಗೂ ಹತ್ತಿರದ ಸಂಬಂಧ ಇರುವುದು ಗೊತ್ತಲ್ಲಾ. ಇಂಗಿಸುವ ನೀರಿನಲ್ಲಿ ವಿಷವಿದ್ದರೆ, ಅದರಿಂದ ಲಾಭಕ್ಕಿಂತಲೂ ಹೆಚ್ಚು ನಷ್ಟ.
interesting..
ReplyDeletepailoor
ಬ್ಲಾಗು ಆರಂಭಿಸಿದ್ದಕೆ ಅಭಿನಂದನೆಗಳು ಸರ್.
ReplyDeleteಸಾವಯವ ಕೃಷಿ ಬಗೆಗಿನ ಬರಹ ಕುತೂಹಲಕಾರಿಯಾಗಿ ಮೂಡಿಬಂದಿದೆ.
Thanks for providing a nice experience.
ReplyDeleteRavi Doddamani
Congrats, Good Experience
ReplyDeleteSuresh Bellechal
even i have tried my effort like you
ReplyDeleteall the very best
http://environmentnman.blogspot.com/
excellent, inspiration story
ReplyDelete