Monday, February 2, 2009

ರೈಲು ಹಳಿಗಳ ಮೇಲೆ ಜಾಗೃತಿ ಯಾತ್ರೆ







೨೦೦೮ ದಶಂಬರ ಕೊನೆಯ ವಾರ.ಸಂಪನ್ಮೂಲ ವ್ಯಕ್ತಿಯಾಗಿ ಬರಬೇಕು ಎಂಬ ಮಿಂಚಂಚೆ ಬರುವ ವರೆಗೆ ನನಗೆ ಈ ಟಾಟಾ ಜಾಗೃತಿ ಯಾತ್ರೆಯ ಬಗ್ಗೆ ಇನಿತೂ ಗೊತ್ತಿರಲಿಲ್ಲ. ದೇಶದಾದ್ಯಂತದ ೧೮ರಿಂದ ೨೫ರೊಳಗೆ ವಯಸ್ಸಿನ ವಿದ್ಯಾರ್ಥಿ - ವಿದ್ಯಾರ್ಥಿನಿಯರನ್ನು ಆಯ್ದು ರೈಲಿನಲ್ಲಿ ದೇಶ ಸುತ್ತಾಡಿಸಿ ಒಂದಷ್ಟು ಸಾಧಕರ ಭೇಟಿ, ಮಾತುಕತೆ ಮೂಲಕ ಕಲಿಕೆ. ಹದಿನೈದು ದಿನಗಳ ಗಾಲಿಯ ಮೇಲಿನ ದೇಶದರ್ಶನ.

ರೈಲು ಹೋಗುತ್ತಿದ್ದಂತೆಯೇ ಆಚೆ, ಈಚೆಯ ಎರಡು ಬೋಗಿಗಳ ಜನರಿಗೆ ಮಳೆಕೊಯ್ಲಿನ ಬಗ್ಗೆ ಸ್ಲೈಡ್ ಶೋ. ಪ್ಲಾಸ್ಮಾ ಸ್ಕ್ರೀನ್, ವಿಡಿಯೋ, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಇತ್ಯಾದಿ ಅಳವಡಿಸಿ ಈ ಬೋಗಿಗಳನ್ನು ಒಳ್ಳೆ ಸಭಾಂಗಣವಾಗಿಸಿದ್ದರು. ರೈಲಿನಲ್ಲಿ ಒಂದೂವರೆ ತಾಸು ಅನಂತರ ತಿರುವನಂತಪುತದ ಪೇಟ್ಟಾ ರೈಲು ಪ್ಲಾಟ್‍ಫಾರ್ಮಿನ ಮೇಲೆ ಒಂದು ತಾಸು - ಹೀಗೆ ಎರಡು ಸೆಶನ್ ತೆಗೆದುಕೊಂಡೆ.

ಅನ್ನಾ ಎಂಬ ವಿದೇಶೀ ಯುವತಿ ನಾನು ಪ್ರೆಸೆಂಟ್ ಮಾಡುತ್ತಿದ್ದಂತೆಯೇ ವಿಶುವಲ್ ಮಿನ್ಯೂಟಿಂಗ್ ಮಾಡಿದ್ದಳು. ನಿಜಕ್ಕೂ ತಲೆದೂಗಬೇಕು. ಮುಖ್ಯಾಂಶಗಳನ್ನು ಗ್ರಹಿಸಿ ಚಕಚಕನೆ ಸಣ್ಣಪುಟ್ಟ ಚಿತ್ರಗಳೊಂದಿಗೆ ಒಬ್ಬರ ಪ್ರೆಸೆಂಟೇಶನನ್ನು ಸಾದರಪಡಿಸುವುದು ದೊಡ್ಡ ಕೌಶಲವೇ ಸರಿ. ಭಲೇ ಅನ್ನಾ!

ಕೆಲವು ಬೋಗಿಗಳನ್ನು ಈ ಮುನ್ನೂರು ಪ್ಲಸ್ ಮಂದಿಗಾಗಿ ತಾತ್ಕಾಲಿಕ ಸ್ನಾನಗೃಹ ಮಾಡಿದ ಮುಹಮ್ಮದ್ ಅವರ ಜಾಣ್ಮೆ ಮೆಚ್ಚುವಂತಿತ್ತು. ಈ ಎಲ್ಲರೂ ದೇಶವಿದೇಶಗಳಲ್ಲಿ ಬೇರೆಬೇರೆ ವೃತ್ತಿಗಳಲ್ಲಿದ್ದು ಈ ಕೆಲಸವನ್ನು ಸ್ವಯಂಸೇವೆಯಾಗಿ ಮಾಡಿದ್ದರು.

ಎರಡೂ ಪ್ರೆಸೆಂಟೇಶನ್ ಬಳಿಕ ಪ್ರಶ್ನೆಗಳ ಸುರಿಮಳೆ. ಸಮಯದ ಮಿತಿಯಿತ್ತು. ಹೆಚ್ಚುಕಮ್ಮಿ ೪೦ ಪ್ರಶ್ನೆಗಳಿಗಾದರೂ ನಾನು ಉತ್ತರಿಸಿರಬೇಕು. ಅತ್ಯಂತ ಖುಷಿ ಕೊಟ್ಟ ಅಂಶ ಎಂದರೆ ಈ ಪೈಕಿ ಅಪ್ರಸ್ತುತ ಪ್ರಶ್ನೆ ಒಂದೂ ಇರಲಿಲ್ಲ! ಹತ್ತು ಸಾವಿರ ಅರ್ಜಿದಾರರ ನಡುವಿನಿಂದ ಈ ೩೦೦ ಎಳೆಯರನ್ನು ಆಯ್ದಿದ್ದರು.

ಆ ಎರಡು ದಿನಗಳು ಸಿಹಿ-ಕಹಿಗಳ ಮಿಶ್ರಣವಾಗಿತ್ತು. ನನ್ನನ್ನು ಹಿಂದೆ ತಿಳೀಸಿದಂತೆ ಈ ಚಾರ್ಟರ್ಡ್ ರೈಲು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಂತು ಮೇಲೇರಿಸಿಕೊಳ್ಳಬೇಕಿತ್ತು. ಅಲ್ಲಿ ಅವರಿಗೆ ಕೊನೆ ಗಳಿಗೆಯಲ್ಲಿ ಅನುಮತಿ ಸಿಗಲಿಲ್ಲವಂತೆ. ಪಯ್ಯನ್ನೂರಿಗೆ ಬನ್ನಿ ಎಂಬ ವಿನಂತಿ. ನಾನು ಟ್ಯಾಕ್ಸಿಯಲ್ಲಿ ಪಯ್ಯನ್ನೂರು ತಲಪುವ ಐದು ನಿಮಿಷ ಮೊದಲೇ ಈ ರೈಲು ಸೀದಾ ಹೋಗಿತ್ತು! ಅದೆಂತ ಆಘಾತ ಅಂತೀರಾ! ಕೊನೆಗೆ ರೈಲನ್ನು ಕಣ್ಣಪುರಂ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಗೆ ಬನ್ನಿ ಎಂಬ ವಿನಂತಿ. ಅದು ಮಧ್ಯರಾತ್ರಿಯ ಸಮಯ. ನನ್ನನ್ನು ಕರೆದೊಯ್ದ ನಮ್ಮೂರ ಟ್ಯಾಕ್ಸಿವಾಲಾ ತರುಣ ದಯಾನಂದರ ಉತ್ಸಾಹ ಅಲ್ಲದಿದ್ದರೆ ನಾನು ಬೇಸತ್ತು ಗುಡ್‍ಬೈ ಅಂದುಬಿಡುತ್ತಿದ್ದೆ. ಕೊನೆಗೂ ಮಾರ್ಗ ಹುಡುಕಿ ಕಣ್ಣಪುರಂ ಸೇರಿ ರೈಲು ಏರಿದಾಗ ಮಧ್ಯರಾತ್ರಿಯ ಒಂದೂವರೆ ಗಂಟೆ.

ಮರುದಿನ ಈ ಎಳೆಯರ ಉತ್ಸಾಹ, ಆಸಕ್ತಿ ಮತ್ತು ಶ್ರದ್ಧೆಯ ಹಿನ್ನೆಲೆಯಲ್ಲಿ ಟಾಟಾ ಜಾಗೃತಿ ಯಾತ್ರಾದ ಸಂಘಟಕರ ಬೇಜವಾಬ್ದಾರಿಯ ಪರಮಾವಧಿಯಿಂದಾದ ಕಹಿ ಮಾಸಿತ್ತು.

8 comments:

  1. ಚಿತ್ರಗಳು ನಿಮ್ಮ ಅನುಭವವನ್ನು ಸಮರ್ಥವಾಗಿ ಸೆರೆ ಹಿಡಿದಿವೆ

    ReplyDelete
  2. Oh.. God... what a wonderfull experience!!!
    Why didn't u tell me about this programme...?!
    Good Story, and of course, OLLEYA NIRUPANE.
    - Anand Pyati
    Gulbarga

    ReplyDelete
  3. ಒಂದು ಅದ್ಭುತ ಸ್ಟೋರಿ ಸರ್. ಇಂಥ ಅನುಭವ ನಮಗೆ ಹೇಳಲೇ ಇಲ್ಲ. ಸಸ್ಪೆನ್ಸಾ ? ಟಾಟಾ ಇಂಡಿಕಾಂ ಇಂಥ 'ಸೇವಾ' ಕೆಲಸಗಳಿಗೆ ಹಣ ಹಾಕುತ್ತಿದ್ದಾರೆ ಎಂಬುದು ಮೊನ್ನೆ ನಾನು ಒರಿಸ್ಸಾಗೆ ಹೋದಾಗ ತಿಳಿದುಕೊಂಡೆ. ಭುವನೇಶ್ವರದ ಗೋಡೆ ಮೇಲೆ ಒರಿಸ್ಸಾ ಸಂಸ್ಕೃತಿಯ ಚಿತ್ತಾರಗಳನ್ನು ಬಿಡಿಸಲು ಇದೇ ಟಾಟಾ ಕಂಪೆನಿಯವರೇ ಹಣ ಕೊಟ್ಟಿದ್ದಾರೆ. ಅವರ ಸೇವೆ ನಿಜಕ್ಕೂ ಶ್ಲಾಘನೀಯ.
    ಗಾಣಧಾಳು ಶ್ರೀಕಂಠ,
    ಬೆಂಗಳೂರು

    ReplyDelete
  4. padreji
    nimmadu adbutha payana...!
    odi kushi aaithu..
    harini
    freelance cartoonist
    mangalore.

    ReplyDelete
  5. ಚಾಮರಾಜ್ ಪ್ರತಿಕ್ರಿಯೆ ಹಾಕಲಾಗುತ್ತಿಲ್ಲ ಎಂದು ಬರೆದದ್ದನ್ನು ಪರೀಕ್ಷಿಸಲು.
    http://sampada.net/blog/ashokkumar/05/02/2009/16532#comment-50786

    ReplyDelete
  6. Thrilling experience by reading, Hope you had great experience. Jai Ho

    ReplyDelete
  7. beautiful and inspiring story truly inspirational reminded me when Sripadre came and took a session in karkala Dr Muralidhar Bhat

    ReplyDelete